ಬಿಲ್ವಪತ್ರೆ ಎಲೆಗಳು ಕೇವಲ ಶಿವನ ಪೂಜೆಗೆ ಮಾತ್ರ ಉಪಯುಕ್ತವಲ್ಲ ಬದಲಾಗಿ ಈ ಎಲೆಗಳಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಅಡಗಿವೆ.
ಬಿಲ್ವಪತ್ರೆ ಎಲೆಗಳ ಪ್ರಯೋಜನಗಳು:
ಭಗವಾನ್ ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಕೇವಲ ಪೂಜೆಗೆ ಮಾತ್ರ ಉಪಯುಕ್ತ ವಲ್ಲ, ಈ ಎಲೆಗಳಲ್ಲಿಯೂ ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳು ಅಡಗಿವೆ.
ಆಯುರ್ವೇದದಲ್ಲಿಯೂ ಕೂಡ ಈ ಎಲೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೀಗಾಗಿ ಈ ಎಲೆಗಳು ಧಾರ್ಮಿಕ ಮಹತ್ವವನ್ನು ಮಾತ್ರವಲ್ಲ, ತನ್ನಲ್ಲಿರುವ ಔಷಧೀಯ ಗುಣಗಳಿಂದಲೂ ಕೂಡ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ ಎನ್ನಲಾಗುತ್ತದೆ.
ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಗೆ ಬಿಲ್ವಪತ್ರೆ ಅಥವಾ ಬೇಲ್ ಎಲೆಗಳನ್ನು ಜಗಿದು ಅದರ ರಸವನ್ನು ನುಂಗುವುದರಿಂದ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಗಳು ಸಿಗುತ್ತವೆ ಎನ್ನಲಾಗುತ್ತದೆ
ಬೇಲ್ ಎಲೆಗಳು ಅಥವಾ ಬಿಲ್ವಪತ್ರೆ ಎಲೆಗಳಲ್ಲಿ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವ ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿಗಳು ಮತ್ತು ಶಿಲೀಂಧ್ರನಾಶಕಗಳು, ವಿಟಮಿನ್ ಎ, ಸಿ, ರಿಬೋಫ್ಲಾವಿನ್, ವಿಟಮಿನ್ ಬಿ 6, ಬಿ 12 ಮತ್ತು ಬಿ 1, ಕ್ಯಾಲ್ಸಿಯಂ ಮತ್ತು ಫೈಬರ್ ಸೇರಿದಂತೆ ಹಲವಾರು ಪೋಷಕಾಂಶ ಗಳನ್ನು ಒಳಗೊಂಡಿವೆ.
ಮಧುಮೇಹ ನಿಯಂತ್ರಣಕ್ಕೆ:
ಬಿಲ್ವಪತ್ರೆ ಎಲೆಗಳನ್ನು ನಿಯಮಿತವಾಗಿ ಜಗಿಯುವುದರಿಂದ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೊಟ್ಟೆಯ ಸಮಸ್ಯೆಗಳಿಗೆ ಒಳ್ಳೆಯದು:
ಬೆಳಗ್ಗೆ ಈ ಎಲೆಗಳನ್ನು ಜಗಿಯುವುದರಿಂದ ಗ್ಯಾಸ್ಟ್ರಿಕ್, ಮಲಬದ್ಧತೆ, ಅಜೀರ್ಣ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ
ಮೂತ್ರಪಿಂಡ ಮತ್ತು ಯಕೃತ್ತನ್ನು ಶುದ್ಧೀಕರಿಸುವಲ್ಲಿ ಪ್ರಯೋಜನಕಾರಿ:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಲ್ವಪತ್ರೆ ಎಲೆಗಳನ್ನು ಅಗಿಯುವುದರಿಂದ ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:
ಈ ಎಲೆಗಳಲ್ಲಿ ಕಂಡು ಬರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ದೇಹದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ವನ್ನು ಹೆಚ್ಚಿಸುತ್ತವೆ.
ಬಾಯಿಯ ದುರ್ವಾಸನೆ ಮತ್ತು ಹುಣ್ಣುಗಳಿಗೆ ಪ್ರಯೋಜನಕಾರಿ:
ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಅಗಿಯುವುದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದು ಬಾಯಿಯ ದುರ್ವಾಸನೆಯನ್ನು ನಿವಾರಿ ಸುತ್ತದೆ. ಅಲ್ಲದೆ ವಸಡು, ಹುಣ್ಣು ಮತ್ತು ಹಲ್ಲಿನ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:
ಬೆಳಗ್ಗೆ ಈ ಎಲೆಗಳನ್ನು ಜಗಿಯುವುದರಿಂದ ಉಬ್ಬಿರುವ ರಕ್ತನಾಳಗಳ ಸಮಸ್ಯೆ ಮತ್ತು ರಕ್ತದೊತ್ತಡದ ಕಾಯಿಲೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈ ಸಮಸ್ಯೆ ಇರುವವರು ದೂರವಿರಬೇಕು:
ಗರ್ಭಿಣಿಯರು, ಥೈರಾಯ್ಡ್ ಅಥವಾ ಇನ್ನಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಜನರು ವೈದ್ಯರನ್ನು ಸಂಪರ್ಕಿಸಬೇಕು.
